Pages

Agenda

ಜನಲೋಕಪಾಲದ ಜೊತೆಗೆ ಈ ಕೆಳಗಿನವುಗಳಿಗೂ ಪ್ರಾಮುಖ್ಯತೆ ಕೊಡುವುದೇ ಇದರ ಉದ್ದೇಶವಾಗಿದೆ.

ತಿರಸ್ಕೃತಿಸುವ ಹಕ್ಕು

(RIGHT TO REJECT)

ನಾವು ಮತದಾನ ಮಾಡಲು ಹೋದಾಗ, ನಮಗೆ ಚುಣಾವನೆಯಲ್ಲಿ ಸ್ಪರ್ಧಿಸುತ್ತಿರುವ ಹೆಚ್ಚಿನ ಅಭ್ಯರ್ಥಿಗಳು ಒಂದು ಭ್ರಷ್ಟರಾಗಿರುತ್ತಾರೆ ಇಲ್ಲ ಅಪರಾಧಿಗಳಾಗಿರುತ್ತಾರೆ ಎಂದು ತಿಳಿದಿರುತ್ತದೆ.ಆದರೆ ನಮ್ಮ ಈಗಿನ ಪ್ರಸ್ತುತ ಮತದಾನ ವ್ಯವಸ್ಥೆಯು ಯಾರಾದರೂ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತದೆ ಮತ್ತು ನಮ್ಮ ಅಮೂಲ್ಯವಾದ ಮತವನ್ನು ಕೆಲಸಕ್ಕೆ ಯೋಗ್ಯರಲ್ಲದ ವ್ಯಕ್ತಿಗಳನ್ನು ಆಯ್ಕೆ ಮಾಡುವಲ್ಲಿ ವ್ಯರ್ಥವಾಗುತ್ತದೆ. ನಮ್ಮ ಪಕ್ಷವು ಮತದಾರರಿಗೆ ಪರ್ಯಯವ್ಯವಸ್ಥೆಯನ್ನು ನೀಡುವ ಯೋಜನೆ ಹೊಂದಿದೆ.ಎಲ್ಲಾ ಮತದಾನ ಮಾಡುವ ಯಂತ್ರಗಳು ಎಲ್ಲರನ್ನು ತಿರಸ್ಕರಿಸುವ ಗುಂಡಿಯನ್ನು ಯಂತ್ರದ ಕೊನೆಯಲ್ಲಿ ಹೊಂದಿರುತ್ತದೆ.ನೀವು ಸ್ಪರ್ಧಿಸಿದ ಎಲ್ಲ ವ್ಯಕ್ತಿಗಳನ್ನು ಇಷ್ಟಪಡದೆ ಇದ್ದಲ್ಲಿ,ನೀವು ತಿರಸ್ಕರಿಸುವ ಗುಂಡಿಯನ್ನು ಬಳಸಬಹುದು.ಒಂದು ವೇಳೆ ಬಹುಮತದೆ ಸಮಯದಲ್ಲಿ ಹೆಚ್ಚಿನ ಮತಗಳು ತಿರಸ್ಕರಿಸುವಹಾಗಿದ್ದರೆ.ಆ ಕ್ಷೇತ್ರದ ಚುನಾವಣೆಯು ರದ್ದಾಗುತ್ತದೆ ಮತ್ತು ಒಂದು ತಿಂಗಳೊಳಗೆ ಹೊಸ ಚುನಾವಣೆಯನ್ನು ನಡೆಸಲಾಗುತ್ತದೆ.ಒಮ್ಮೆ ರದ್ದು ಪಡಿಸಿದ ಚುಣಾವನೆಗಳಲ್ಲಿ ಭಾಗವಹಿಸಿದ ಪಕ್ಷಗಳು ಮತ್ತು ಅವರ ಅಭ್ಯರ್ಥಿಗಳು ಮರುಚುಣಾವನೆಯಲ್ಲಿ ಭಾಗವಹಿಸುವದನ್ನು ಕೈಬಿಡಲಾಗುತ್ತದೆ.
----------------------------------------------------------------------------------------------------------------------------------
ಮರುಪಡೆಯುವ ಅಥವಾ ಹಿಂದಕ್ಕೆ ಕರೆಯುವ ಹಕ್ಕು

(RIGHT TO RECALL)

ಇಂದು ನಾವು ಒಬ್ಬ ಅಭ್ಯರ್ಥಿಯನ್ನು ನಮ್ಮ ಮತ ನೀಡಿ, ಆತ ಅಥವಾ ಆಕೆಯನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತೆವೆ.ಅವರು ಚುಣವನೆಯ ನಂತರ ಅವರು ನಮ್ಮ ಜೀವನದಿಂದ ಮರೆಯಾಗುತ್ತಾರೆ.ಇಂದು ಹೆಚ್ಚಿನ ಚುನಾಯಿತ ಪ್ರತಿನಿಧಿಗಳು ತಮ್ಮ ಘಟಕಗಳ ಸಮಸ್ಯೆಗಳನ್ನು ಕೇಳಲು ಯಾವುದೇ ಸಮಯವನ್ನು ನೀಡುವುದಿಲ್ಲ. ಪ್ರಸಕ್ತ ಚುನಾವಣಾ ವ್ಯವಸ್ಥೆಯಲ್ಲಿ, ಜನರು ಯಾವುದೇ ಅಭ್ಯರ್ಥಿ ಆಯ್ಕೆಯಾದರೆ 5 ವರ್ಷಗಳ ಕಾಲ ಈ ಅಭ್ಯರ್ಥಿಯ ಅಲಕ್ಷ್ಯದಿಂದ ಬಳಲುತ್ತಿರುತ್ತಾರೆ. ಅದ್ದರಿಂದ ನಾವು ಪರ್ಯಾಯ ರಚಿಸಲು ಬಯಸುತ್ತೆವೆ.ನಾವು ಅಭ್ಯರ್ಥಿಯನ್ನು ಹಿಂಪಡೆಯುವ ಹಕ್ಕನ್ನು ಜಾರಿಗೆ ತರುತ್ತೆವೆ. ಸಾಮಾನ್ಯ ಜನರು ಈ ಕನೂನಿನಲ್ಲಿ ಕಛೇರಿಯಿಂದ ಒಬ್ಬ ಭ್ರಷ್ಟ ಶಾಸಕನನ್ನು (ಎಂಎಲ್ಎ) ಅಥವಾ ಸಂಸದರನ್ನು (ಎಂಪಿ) ತೆಗೆದುಹಾಕಲು 5 ವರ್ಷಗಳ ವರೆಗೆ ಕಾಯಬೆಕಿಲ್ಲ.ಜನರು ತಮ್ಮ ಪ್ರತಿನಿಧಿಯನ್ನು ಮರುಪಡೆಯಲು ಮತ್ತು ಹೊಸ ಚುನಾವಣೆ ನಡೆಸಲು ಯಾವುದೇ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ದೂರು ಮಾಡಬಹುದು.

No comments:

Post a Comment